Title: Taravalla Tagi Ninna Tamburi (ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ )
Lyricist: Saint Shishunal Sharif (ಸಂತ ಶಿಶುನಾಳ ಶರೀಫ )
Listen to it here : ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (೨) (ಪ )
ಸರಸ ಸಂಗೀತದ ಕುರುಹುಗಳರಿಯದೆ (೨)
ಬರಿದೇ ಬಾರಿಸದಿರೋ ತಂಬೂರಿ.
ಮದ್ದಲ್ಲಿ ದನಿಯೊಳು ತಂಬೂರಿ ಅದ, ತಿದ್ದಿ ನುಡಿಸಬೇಕೋ ತಂಬೂರಿ (೨)
ಸಿದ್ದ ಸಾಧಕರ ವಿದ್ಯೆಗೆ ಒದಗುವ (೨)
ಬುದ್ಧಿವಂತಕ್ಕೆ ತಕ್ಕ ತಂಬೂರಿ.
ತರವಲ್ಲ ತಗಿ ನಿನ್ನ........ (೧)
ಬಾಳಬಲ್ಲವರಿಗೆ ತಂಬೂರಿ ದೇವಾ, ಬಾಳಾಕ್ಷ ರಚಿಸಿದ ತಂಬೂರಿ (೨)
ಹೇಳಲಿ ಏನಿದರ ಹಂಚಿಕೆ ತಿಳಿಯದ (೨)
ತಾಳಗೇಡಿಗೆ ಸಲ್ಲ ತಂಬೂರಿ.
ತರವಲ್ಲ ತಗಿ ನಿನ್ನ........ (೧)
ಸತ್ಯ ಶರಧಿಯೊಳು ತಂಬೂರಿ ನಿತ್ಯ, ಉತ್ತಮರಾಡುವ ತಂಬೂರಿ,
ಬತ್ತೀಸರಾಗರದಾ ಬಗೆಯನರಿಯದ (೨)
ಕತ್ತಿಗಿನ್ಯಾತಕೆ ತಂಬೂರಿ.
ತರವಲ್ಲ ತಗಿ ನಿನ್ನ........ (೧)
ಹಸನಾದ ಮೇಳಕ್ಕೆ ತಂಬೂರಿ ಇದು, ಕುಶಲರಿಗೊಪ್ಪುವ ತಂಬೂರಿ (೨)
ಶಿಶುನಾಳಾಧೀಶನ ಓದುಪುರಾಣಾದಿ, ಹಸನಾಗಿ ಬಾರಿಸೋ ತಂಬೂರಿ.
ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (೨)
Subscribe to:
Post Comments (Atom)
lyrics ನಲ್ಲಿ ಸುಮಾರು ತಪ್ಪುಗಳಿವೆ.ಉದಾ:ತರವಲ್ಲ 'ತಾಗಿ' ಅಲ್ಲ "ತಗಿ"
ReplyDelete'ಹಾಸನದ' ಮಾಯಾಳಕ್ಕೆ ಅಲ್ಲ "ಹಸನಾದ ಮಾಯಾಳಕ್ಕೆ"
'ಶಿಶುನಾಳಾಧೀಶನ'ಅಲ್ಲ *ಶಿಶುನಾಳಧೀಶನ"
ಇತ್ಯಾದಿ ..
ಹಸನಾದ ಮ್ಯಾಳಕ್ಕೆ(concert in bookish Kannada ಮೇಳಕ್ಕೆ) ಸರ್,
Deleteಕರೆಕ್ಷನ್ಸ್ ಮಾಡಿದ್ದೀನಿ ಸರ್. ಥಾಂಕ್ ಯು
DeleteCorrect sir
ReplyDeleteಸರಿ..🙏🙏🙏🙏
ReplyDeleteಬತ್ತೀಸರಾಗರದ ಅಥವಾ ಭಕ್ತಿ ಸಾಗರದ ...ಪದ ಯಾವುದು?
ReplyDelete