Wednesday, July 27, 2016
Mohada Hendati teerida balika (Kannada) ಮೋಹದ ಹೆಂಡತಿ ತೀರಿದ ಬಳಿಕ.
ಮೋಹದ ಹೆಂಡತಿ ತೀರಿದ ಬಳಿಕಾ
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ || ಪ ||
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೋ ||ಅ.ಪ.||
ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾದುವುದ್ಯಾಕೋ || ೧ ||
ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ
ಸಾಹಿತ್ಯ -- ಶಿಶುನಾಳ ಶರೀಫ
ಸಂಗೀತ / ಗಾಯನ -- ಸಿ ಅಶ್ವಥ್
Subscribe to:
Post Comments (Atom)
No comments:
Post a Comment