Monday, July 25, 2016

Ellaranthavanalla nana ganda - Kannada Lyrics (ಎಲ್ಲರಂಥವನಲ್ಲ ನನ ಗಂಡ)

Ellaranthavanalla nana ganda - Lyrics:

ಎಲ್ಲರಂಥವನಲ್ಲ ನನ ಗಂಡ , ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ.
ಎಲ್ಲರಂಥವನಲ್ಲ ಕೇಳೇ, ಸೊಲ್ಲು ಸೊಲ್ಲಿಗೆ ಬೈದು ನನ್ನ,
ಎಲ್ಲುಹೋಗದಹಾಂಗ ಮಾಡಿಟ್ಟ, ಕಾಲ್ಮುರಿದುಬಿಟ್ಟ, ಎಲ್ಲರಂಥವನಲ್ಲ ನನ ಗಂಡ.

ತುಂಟ ಸವತಿಯ ಸೊಂಟ ಮುರಿಹೊಡೆದ, ಒಣಪಂಟ ಮಾತಿನ ಗಂಟುಗಳ್ಳರ ಮನೆಗೆ ಬರಗೊಡದ
ಕುಂಟ ಕುರುಡಾ ರೆಂಟುಮಂದಿ, ಗಂಟುಬಿದ್ದರೆ ಅವರಕಾಣುತ,
ಗಂಟಲಕೆ-ಗಾಲಾದ ಮೇಲತ್ತ , ತಕ್ಕವನೇ ಸಿಕ್ಕಾ, ಎಲ್ಲರಂಥಹವನಲ್ಲ ನನ ಗಂಡ.
ಎಲ್ಲರಂಥವನಲ್ಲ ನನ ಗಂಡ , ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ.

ಅತ್ತೆಮಾವರ ಮನೆಯ ಬಿಡಿಸಿದನ, ಮತ್ತಲ್ಲಿ ಮೂವರ ಮಕ್ಕಳೈವರ ಮಮತೆ ಕೆಡಿಸಿದನೇ,
ಯತ್ತಾಹೋಗದೆ ಚಿತ್ತವದಲದೆ ಗೊತ್ತಿನಲ್ಲೇ ಇಟ್ಟು ನನ್ನನು,
ಮುತ್ತಿನಾ ಮೂಗುತಿಯ ಕೊಟ್ಟಾನೇ, ಅವನೇನು ದಿಟ್ಟನೆ, ಎಲ್ಲರಂಥಹವನಲ್ಲ ನನ ಗಂಡ.
ಎಲ್ಲರಂಥವನಲ್ಲ ನನ ಗಂಡ , ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ.

ಕಂತೆ ಕೇಳೇ ಕರುಣ ಗುಣದಿಂದ, ಎನಗಿಂಥ ಪುರುಷನು ಬಂದು ದೊರಕಿದ ಪುಣ್ಯ ಫಲದಿಂದ,
ಕಂತೆ ಬಾರೆಂತೆಂದು ಕರೆದೇ, ಕಂತಮಂದಿರದೋಳಕೆ ಒಯ್ದು,
ಭ್ರಾನ್ತಿಭವದುರಿತವನು ಹರಿಸಿದನೇ, ಶಿಶುನಾಳ ಧೀಶ, ಎಲ್ಲರಂಥಹವನಲ್ಲ ನನ ಗಂಡ.
ಎಲ್ಲರಂಥವನಲ್ಲ ನನ ಗಂಡ , ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ. ಎಲ್ಲರಂಥವನಲ್ಲ ನನ ಗಂಡ...

3 comments:

  1. Nice to see this collection. Could you please explain this song as well? Thanks

    ReplyDelete
    Replies
    1. https://www.youtube.com/watch?v=xAiq0ljavj8

      Delete
  2. https://www.youtube.com/watch?v=xAiq0ljavj8

    ReplyDelete